ರಿಯಲಿ ಮಿ ಯು-1 ಭಾರತದಲ್ಲಿ ಬಿಡುಗಡೆ: ಬೆಲೆ, ವಿಶೇಷತೆಗಳ ಬಗ್ಗೆ ಇಲ್ಲಿದೆ ವಿವರ.

ಚೀನಾದ ಸ್ಮಾರ್ಟ್ ಫೋನ್ ತಯಾರಿಕಾ ಸಂಸ್ಥೆ ರಿಯಲ್ ಮಿ ಭಾರತದ ಮಾರುಕಟ್ಟೆಗೆ ರಿಯಲ್ ಮಿ ಯು-1 ಮೊಬೈಲ್ ನ್ನು ಪರಿಚಯಿಸಿದೆ. 
3+32GB ಸ್ಟೋರೇಜ್ ಸಾಮರ್ಥ್ಯ ಹೊಂದಿರುವ ಮೊಬೈಲ್ ಬೆಲೆ 11,999 ಆಗಿದ್ದರೆ, 4+64 ಜಿಬಿ ಮೊಬೈಲ್ ಬೆಲೆ 14,499 ರೂಪಾಯಿಗಳಾಗಿವೆ. ಡಿ.5 ರಿಂದ ಅಮೇಜಾನ್ ನಲ್ಲಿ ಎಕ್ಸ್ಲ್ಯೂಸಿವ್ ಮಾರಾಟ ಲಭ್ಯವಾಗಲಿದ್ದು, ಮಧ್ಯಾಹ್ನ 12:00 ಗಂಟೆಯಿಂದ ಸಿಗಲಿದೆ. ಯು1 ಮೊಬೈಲ್ ಮೀಡಿಯಾ ಟೆಕ್ ಹೆಲಿಯೀ P70 ಪ್ರೊಸೆಸರ್ ನ್ನು ಹೊಂದಿದ್ದು, ಎಐ ಪ್ರೊಸೆಸಿಂಗ್ ಗೆ ಸಹಕಾರಿಯಾಗುವ ಸಿಪಿಯು, ಜಿಪಿಯು ಅಪ್ ಗ್ರೇಡ್ಸ್ ನ್ನೂ ಹೊಂದಿದೆ. 
ಹೆಲಿಯೊ P60 ಪ್ರೊಸೆಸರ್ ಗೆ ಹೋಲಿಸಿದರೆ ಹೆಲಿಯೋ p70 ಪ್ರೊಸೆಸರ್ ಎಐ ಪ್ರೊಸೆಸಿಂಗ್ ನ್ನು ಮತ್ತಷ್ಟು ಪರಿಣಾಮಕಾರಿಯಾಗಿರಿಸುವುದಕ್ಕೆ ಸಹಕರಿಸಲಿದೆ. 4G ಎಲ್ ಟಿಇ ಹಾಗೂ 300 ಎಂಬಿ ಡೌನ್ ಲೋಡ್ ಪರ್ಫಾಮೆನ್ಸ್ ನ್ನು ಹೊಂದಿದೆ. 
6.3  ಇಂಚಿನ ಎಫ್ ಹೆಚ್ ಡಿ ಜೊತೆಗೆ 90.80 ಡ್ಯೂಡ್ರಪ್ ಫುಲ್ ಸ್ಕ್ರೀನ್ ಇರುವುದು ಮೊಬೈಲ್ ನ ವಿಶೇಷತೆಗಳಾಗಿವೆ. 13+2 ಮೆಗಾಪಿಕ್ಸಲ್ ಕ್ಯಾಮರ, 25 ಎಂಪಿ ಸೋನಿ ಫ್ಲ್ಯಾಗ್ ಶಿಪ್ ಸೆನ್ಸಾರ್-IMX576 ನ್ನು ಹೊಂದಿದೆ. 
ಜುಲೈ ತಿಂಗಳಿನಲ್ಲಿ ಒಪ್ಪೊ ಸಂಸ್ಥೆಯಿಂದ ಪ್ರತ್ಯೇಕಗೊಂಡಿರುವುದನ್ನು ರಿಯಲ್ ಮಿ ಘೋಷಿಸಿತ್ತು.

No comments:

Post a Comment

New Technology Changes  We're Excited About for 2019 Last year, we pegged our hopes for 2018 on ambitious technologies like...