Technolagy

ಬಾಹ್ಯಾಕಾಶದಲ್ಲಿ ಆರು ತಿಂಗಳ ಪ್ರಯಾಣ ನಡೆಸಿ ಮಂಗಳ ಗ್ರಹಕ್ಕೆ ಬಂದಿಳಿದ ನಾಸಾ ಉಪಗ್ರಹ..!

ಕ್ಯಾಪ್ ಕ್ಯಾನವೆಲ್: ಅಂತರಿಕ್ಷದಲ್ಲಿ ಆರು ತಿಂಗಳ ಕಾಲ ಪ್ರಯಾಣ ನಡೆಸಿದ ನಂತರ ನಿನ್ನೆ ಸೋಮವಾರ ಸ್ಥಳೀಯ ಕಾಲಮಾನ ಮಧ್ಯಾಹ್ನ 1 ಗಂಟೆಯ ಹೊತ್ತಿಗೆ ನಾಸಾ ಸಂಸ್ಥೆಯ ಬಾಹ್ಯಾಕಾಶ ನೌಕೆ ' ಇನ್ ಸೈಟ್' ಮಂಗಳ ಗ್ರಹದ ಮೇಲೆ ಯಶಸ್ವಿಯಾಗಿ ಬಂದಿಳಿದಿದೆ.

ಆರು ತಿಂಗಳಲ್ಲಿ 300 ಮಿಲಿಯನ್ ಮೈಲು (482 ಮಿಲಿಯನ್ ಕಿಲೋ ಮೀಟರ್) ಪ್ರಯಾಣ ನಡೆಸಿದ ನೌಕೆ 6 ನಿಮಿಷಗಳಲ್ಲಿ ಕೆಂಪು ಗ್ರಹವಾದ ಮಂಗಳನ ಮೇಲೆ ಬಂದಿಳಿದಿದೆ.

ಕ್ಯಾಲಿಫೋರ್ನಿಯಾದ ಪಸಡೆನಾದಲ್ಲಿರುವ ನಾಸಾದ ಜೆಟ್ ಪ್ರೊಪಲ್ಷನ್ ಪ್ರಯೋಗಾಲಯದಲ್ಲಿ ನೌಕೆಯನ್ನು ನಿಯಂತ್ರಣ ಮಾಡುತ್ತಿದ್ದವರು ಮಂಗಳ ಗ್ರಹದ ಮೇಲೆ ಬಾಹ್ಯಾಕಾಶ ನೌಕೆ ಬಂದಿಳಿಯುತ್ತಿದ್ದಂತೆ ಹರ್ಷೋದ್ಗಾರದಿಂದ ಕೇಕೆ ಹಾಕುತ್ತಾ ಕುಣಿದು ಕುಪ್ಪಳಿಸಿದರು, ಸಂತೋಷದ ಕರತಾಡನ ಮುಗಿಲುಮುಟ್ಟಿತ್ತು.

ಕಳೆದ ಮೇ ತಿಂಗಳಲ್ಲಿ ನಾಸಾ ಸಂಸ್ಥೆ ಜೋಡಿ ಸಣ್ಣ ಉಪಗ್ರಹವನ್ನು ಅಂತರಿಕ್ಷಕ್ಕೆ ಕಳುಹಿಸಿಕೊಟ್ಟಿತ್ತು. ಅಲ್ಲಿಂದ ನಂತರ ಕಾಲಕಾಲಕ್ಕೆ ಉಪಗ್ರಹದ ಚಲನವಲನ, ಮಾಹಿತಿಗಳು ವಿಜ್ಞಾನಿಗಳಿಗೆ ಸಿಗುತ್ತಿದ್ದವು. ಮಂಗಳ ಗ್ರಹದ ಮೇಲೆ ಉಪಗ್ರಹ ಬಂದಿಳಿಯುತ್ತಿದ್ದಂತೆ ಮಂಗಳ ಗ್ರಹದ ಮೇಲ್ಮೈಯ ಛಾಯಾಚಿತ್ರ ಕಳುಹಿಸಿದೆ.

ಛಾಯಾಚಿತ್ರದಲ್ಲಿ ಮಂಗಳನ ಮೇಲೆ ಅವಶೇಷಗಳಂತೆ ಚುಕ್ಕೆಯನ್ನು ಹೊಂದಿದೆ. ಸುತ್ತಲೂ ಬಂಡೆಕಲ್ಲುಗಳಂತಹ ದೃಶ್ಯಗಳಿದೆ. ವಿಜ್ಞಾನಿಗಳು ಅಂದುಕೊಂಡಿದ್ದ ರೀತಿಯಲ್ಲಿಯೇ ಅವರಿಗೆ ಮಂಗಳನ ಮೇಲ್ಮೈ ಛಾಯಾಚಿತ್ರದಿಂದ ಕಂಡುಬಂದಿದೆ. ಇನ್ನು ಕೆಲ ಗಂಟೆಗಳಲ್ಲಿ ಅಥವಾ ಮುಂದಿನ ದಿನಗಳಲ್ಲಿ ಮಂಗಳ ಗ್ರಹದ ಇನ್ನಷ್ಟು ಸ್ಪಷ್ಟ ಚಿತ್ರಗಳು ಸಿಗುವ ನಿರೀಕ್ಷೆಯಲ್ಲಿದ್ದಾರೆ.

ಯಾವುದೇ ದೋಷವಿಲ್ಲದೆ, ಅಡೆತಡೆಗಳಾಗದೆ ಸರಿಯಾಗಿ ಉಪಗ್ರಹ ಮಂಗಳನ ಮೇಲೆ ಬಂದಿಳಿದಿದೆ, ಇದೊಂದು ಅಭೂತಪೂರ್ವ ಕ್ಷಣ ಎಂದು ಪ್ರಯೋಗಾಲಯದ ಮುಖ್ಯ ಎಂಜಿನಿಯರ್ ರಾಬ್ ಮಾನ್ನಿಂಗ್ ತಿಳಿಸಿದ್ದಾರೆ.

ಇನ್ ಸೈಟ್ ಉಪಗ್ರಹ ಮಂಗಳ ಗ್ರಹದ ಒಳಭಾಗಗಳಲ್ಲಿ ಅಧ್ಯಯನ ಮಾಡಿ ಇಂದಿನ ಜನಾಂಗಕ್ಕೆ ಮೌಲ್ಯಯುತ ವಿಜ್ಞಾನದ ಮಾಹಿತಿಗಳನ್ನು ನೀಡಲಿದೆ. ಚಂದ್ರನಲ್ಲಿಗೆ ಖಗೋಳಶಾಸ್ತ್ರಜ್ಞರನ್ನು ಕಳುಹಿಸಿ ನಂತರ ಮಂಗಳ ಗ್ರಹಕ್ಕೆ ಕಳುಹಿಸಲಿದೆ.

ಕಳೆದ ಮೇ 5ರಂದು ಕ್ಯಾಲಿಫೋರ್ನಿಯಾದ ವಂಡೆನ್ ಬರ್ಗ್ ವಾಯುನೆಲೆಯಿಂದ ಉಪಗ್ರಹವನ್ನು ಕಕ್ಷೆಗೆ ಕಳುಹಿಸಲಾಗಿತ್ತು. ನಂತರ ಭೂಮಿಯಿಂದ ಮಂಗಳ ಗ್ರಹದೆಡೆಗೆ ಪ್ರಯಾಣ ಬೆಳೆಸಲು 6 ತಿಂಗಳ ಸಮಯ ತೆಗೆದುಕೊಂಡಿತು, ಮಂಗಳ ಗ್ರಹದಲ್ಲಿ ನೆಲೆಯಾಗುತ್ತಿರುವ ನಾಸಾದ ಮೊದಲ ಬಾಹ್ಯಾಕಾಶ ನೌಕೆ ಇದಾಗಿದೆ.

No comments:

Post a Comment

New Technology Changes  We're Excited About for 2019 Last year, we pegged our hopes for 2018 on ambitious technologies like...