ಜ.8, 9 ಭಾರತ್ ಬಂದ್ ಎಫೆಕ್ಟ್; ರಾಜ್ಯದಲ್ಲಿ ಏನಿರುತ್ತೆ, ಏನಿರಲ್ಲ?

ಮಂಗಳೂರು:ಕೇಂದ್ರ ಸರ್ಕಾರದ ನೀತಿಗಳನ್ನು ವಿರೋಧಿಸಿ, ಕಾರ್ಮಿಕರ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಜ.8 ಮತ್ತು 9ರಂದು ಕರೆ ನೀಡಿರುವ ಭಾರತ್ ಬಂದ್ ಗೆ ಈಗಾಗಲೇ ಹಲವಾರು ಸಂಘಟನೆಗಳು ಬೆಂಬಲ ಸೂಚಿಸಿವೆ. ಬೆಂಗಳೂರು, ಮಂಗಳೂರು ಸೇರಿದಂತೆ ರಾಜ್ಯದಲ್ಲಿಯೂ ಬಂದ್ ಬಿಸಿ ತಟ್ಟುವ ಸಾಧ್ಯತೆ ದಟ್ಟವಾಗಿದೆ.

ಈ ಹಿನ್ನೆಲೆಯಲ್ಲಿ ನಾಳೆ, ನಾಡಿದ್ದು ನಡೆಯಲಿರುವ ಭಾರತ್ ಬಂದ್ ಗೆ ಪೆಟ್ರೋಲ್ ಬಂಕ್ ಮಾಲೀಕರ ಅಸೋಸಿಯೇಶನ್, ಖಾಸಗಿ ಬಸ್ ಮಾಲಕರ ಸಂಘ,ಟ್ಯಾಕ್ಸಿ ಅಸೋಸಿಯೇಶನ್, ರಾಜ್ಯ ಹೋಟೆಲ್ ಮಾಲಕರ ಸಂಘ, ಏರ್ ಪೋರ್ಟ್ ಟ್ಯಾಕ್ಸಿ ಮಾಲಕರ ಸಂಘ ಬೆಂಬಲ ನೀಡಿಲ್ಲ.  ನಾಳೆ, ನಾಡಿದ್ದು ಯಾವೆಲ್ಲ ಸೇವೆ ಇರುತ್ತೆ, ಇರಲ್ಲ ಎಂಬ ವಿವರ ಇಲ್ಲಿದೆ..
ದಕ್ಷಿಣ ಕನ್ನಡ ಶಾಲಾ ಕಾಲೇಜಿಗೆ ರಜೆ ಇಲ್ಲ;
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ, ಕಾಲೇಜುಗಳಿಗೆ ರಜೆ ಇಲ್ಲ ಎಂದು ಜಿಲ್ಲಾಧಿಕಾರಿ ಸೆಂಥಿಲ್ ಕುಮಾರ್ ತಿಳಿಸಿದ್ದಾರೆ. ಏತನ್ಮಧ್ಯೆ ಉಡುಪಿ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಇದೆಯೋ ಇಲ್ಲವೋ ಎಂಬ ಬಗ್ಗೆ ಜಿಲ್ಲಾಧಿಕಾರಿಯವರ ಆದೇಶದ ನಂತರವೇ ತಿಳಿಯಬೇಕಾಗಿದೆ.
ಹಾಸನದಲ್ಲಿಯೂ ಶಾಲಾ ಕಾಲೇಜುಗಳಿಗೆ ರಜೆ ಇಲ್ಲ ಎಂದು ತಿಳಿದು ಬಂದಿದೆ. ಕೊಡಗಿನಲ್ಲಿ ಮುಷ್ಕರಕ್ಕೆ ಬೆಂಬಲ ಇಲ್ಲ.
ರಾಣಿ ಚೆನ್ನಮ್ಮ ವಿವಿ ಪರೀಕ್ಷೆಗಳು ಮುಂದೂಡಿಕೆ:
ರಾಣಿ ಚೆನ್ನಮ್ಮ ವಿವಿ ಪರೀಕ್ಷೆಗಳು ಮುಂದೂಡಲಾಗಿದೆ. ಶಿವಮೊಗ್ಗ ವಿವಿ ಪಿರೀಕ್ಷೆ ಮುಂದೂಡಿಕೆ. ಜ.20. 21ರಂದು ಪರೀಕ್ಷೆ ದಿನಾಂಕ ನಿಗದಿಪಡಿಸಿದೆ.
ಏನಿರುತ್ತೆ:
*ಖಾಸಗಿ ಬಸ್
*ಪೆಟ್ರೋಲ್ ಬಂಕ್, ಸರ್ಕಾರಿ ಶಾಲೆ(ಪರಿಸ್ಥಿತಿಗೆ ಅನುಗುಣವಾಗಿ ರಜೆ)
*ಹೋಟೆಲ್, ವಿಮಾನ, ರೈಲು,
*ಮೆಟ್ರೋ, ಚಿತ್ರಮಂದಿರ, ಆಸ್ಪತ್ರೆ, ಮೆಡಿಕಲ್
*ಕೋರ್ಟ್, ಎಸ್ ಬಿಐ ಸೇರಿದಂತೆ ಕೆಲವು ಬ್ಯಾಂಕ್, ಮಾಲ್,
ಏನೇನ್ ಇರಲ್ಲ:
*ಖಾಸಗಿ ಶಾಲೆ ಬಂದ್(ಪರಿಸ್ಥಿತಿಗೆ ಅನುಗುಣವಾಗಿ ರಜೆ)
*ಕೆಎಸ್ಆರ್ ಟಿಸಿ, ಬಿಎಂಟಿಸಿ
* ಆ್ಯಪ್ ಆಧಾರಿತ ಟ್ಯಾಕ್ಸಿ, ಆಟೋ ಸೇವೆ ಬಂದ್
*ಬ್ಯಾಂಕ್, ಉಬರ್, ಒಲಾ ಕ್ಯಾಬ್, ಹಲವು ಬ್ಯಾಂಕ್

Read more at https://www.udayavani.com/kannada/news/state-news/350967/bharat-bandh-on-jan-8-9-what-is-open-what-is-closed#gzvpjzm4w3kpViGy.99

No comments:

Post a Comment

New Technology Changes  We're Excited About for 2019 Last year, we pegged our hopes for 2018 on ambitious technologies like...